ಆಲ್ಬೇನಿಯ
	ದಕ್ಷಿಣ ಯೂರೋಪಿನ ಏಡ್ರಿಯಾಟಿಕ್ ಸಮುದ್ರ ತೀರದಲ್ಲಿ ಯುಗೋಸ್ಲಾವಿಯ ಮತ್ತು ಗ್ರೀಸ್ ದೇಶಗಳ ಮಧ್ಯೆ ಇರುವ ಒಂದು ಪರ್ವತಮಯ ಬಾಲ್ಕನ್ ದೇಶ. ಉತ್ತರ ಅಜûರ್‍ಬೈಜಾನಿನ ಹಳೆಯ ಹೆಸರು. ವಿಸ್ತೀರ್ಣ ಸುಮಾರು 11,020 ಚ.ಮೈ. ಜನಸಂಖ್ಯೆ 1,56,950 (1964). ಇವರಲ್ಲಿ ಹೆಚ್ಚು ಭಾಗ ಮಹಮ್ಮದೀಯರು. ಉತ್ತರ ದಕ್ಷಿಣವಾಗಿ ಸುಮಾರು 320 ಕಿ.ಮೀ. ಉದ್ದ ಪೂರ್ವ ಪಶ್ಚಿಮವಾಗಿ 80 ಕಿ.ಮೀ. ಅಗಲ ಹಬ್ಬಿದೆ. ಕರಾವಳಿ ಮೈದಾನ ಜೌಗು ಪ್ರದೇಶವಾದರೂ ಫಲವಾತ್ತಾಗಿದೆ. ತಗ್ಗಾದ ಮೈದಾನ ಮತ್ತಿ ಕಣಿವೆಗಳಲ್ಲಿ ಮುಸುಕಿನ ಜೋಳ, ಹತ್ತಿ, ಹೊಗೆಸೊಪ್ಪು, ಸಕ್ಕರೆ ಬೀಟ್‍ಗಳನ್ನು ಬೆಳೆಯುತ್ತಾರೆ. 13% ರಷ್ಟು ಭೂಮಿ ಮಾತ್ರ ವ್ಯವಸಾಯ ಯೋಗ್ಯವಾಗಿದೆ. ಪರ್ವತ ಹಾಗೂ ಗುಡ್ಡಪ್ರದೇಶಗಳ ಜನರಿಗೆ ಕುರಿ ಮತ್ತು ಮೇಕೆಗಳನ್ನು ಸಾಕುವುದೇ ಮುಖ್ಯ ಕಸಬು. ಕಲ್ಲೆಣ್ಣೆ, ತಾಮ್ರ, ಉತ್ಪಾದಿಸಲಾಗುವುದು. 

	ರಾಜಧಾನಿ ಟಿರಾನ್, ಜನಸಂಖ್ಯೆ 1,20,000 ಕ್ಕಿಂತಲೂ ಹೆಚ್ಚಾಗಿದೆ. ಮುಖ್ಯ ರೇವುಪಟ್ಟಣ ಡೂರಸ್, ಟಿರಾನ್ ಮತ್ತು ಡೂರಸ್ ಪಟ್ಟಣಗಳಿಗೆ ರೈಲುಮಾರ್ಗದ ಸಂಪರ್ಕವಿದೆ. 

	ವಿಸ್ತಾರದಲ್ಲಿ ಸಣ್ಣದಾಗಿದ್ದು ಹಿಂದುಳಿದ ದೇಶವಾದ ಆಲ್ಬೇನಿಯವನ್ನು ನಾನಾ ಜನಾಂಗದವರು ಗೆದ್ದು ಆಳಿದರು. ಮುಖ್ಯವಾಗಿ ಮ್ಯಾಸಿಡೋನಿಯನ್ನರು, ರೋಮನರು, ಬೈeóÁಂಟೈನ್ ಅರಸರು ಮತ್ತು ತುರ್ಕಿಯವರು. ಅವರ ಆಳ್ವಿಕೆ ಅಲ್ಲಿನ ಗುಡ್ಡಗಾಡು ಜನರಿಗೆ ಎಂದೂ ಒಪ್ಪಿಗೆಯಾಗಲಿಲ್ಲ. ಹನ್ನೊಂದನೆಯ ಶತಮಾನದಲ್ಲಿ ರಾಬರ್ಟ್ ಗಿಸ್ಕಾರ್ಡ್ ಎಂಬುವನ ನೇತೃತ್ವದಲ್ಲಿ ಇಟಾಲಿಯನ್ನರು ಆ ದೇಶಕ್ಕೆ ಬಂದು ನೆಲೆಸಿದರು; ಅನಂತರ ವೆನಿಸ್, ನೇಪಲ್ಸ್‍ಗಳವರೂ ಬಂದರು. ಈ ಮಧ್ಯೆ ಕಾನ್‍ಸ್ಟಾಂಟಿನೋಪಲ್‍ನ ತುರ್ಕರ ದಾಳಿ ಪ್ರಾರಂಭವಾಗಿತ್ತು. 15ನೆಯ ಶತಮಾನದಲ್ಲಿ, ಮುಖ್ಯವಾಗಿ ಸ್ಕಾಂಡರ್‍ಬೇಗ್ ಎಂಬುವನ ಅಧೀನದಲ್ಲಿ, ಆಲ್ಬೇನಿಯನ್ನರ ಈ ದಾಳಿಯನ್ನೆದುರಿಸಿದರು. ಆದರೆ ಅದು ಫಲಕಾರಿಯಾಗಲಿಲ್ಲ. ಕೊನೆಗೆ 1748ರಲ್ಲಿ ಆಲ್ಬೇನಿಯ ತುರ್ಕಿಯ ಒಂದು ಪ್ರಾಂತ್ಯವಾಯಿತು. ಬಾಲ್ಕನ್ ಯುದ್ಧ ಮುಗಿದ ಮೇಲೆ (ನೋಡಿ- ಬಾಲ್ಕನ್-ಯುದ್ಧಗಳು) 1913ರಲ್ಲಿ ಆಲ್ಬೇನಿಯ ಸ್ವತಂತ್ರ ರಾಜ್ಯವಾಗಬೇಕೆಂಬುದಕ್ಕೆ ಇತರ ರಾಷ್ಟ್ರಗಳು ಒಪ್ಪಿಗೆಯನ್ನಿತ್ತುವು. ಆದರೆ ಈ ಸಣ್ಣ ರಾಜ್ಯ ನಿರ್ಮಿತವಾದದ್ದು ಜರ್ಮನಿಯ ರಾಜಕೀಯ ಕುಟಿಲತೆಯಿಂದ, ಮುಂದೆ ಅದನ್ನು ಸ್ವಾಧೀನಪಡಿಸಿಕೊಳ್ಳುವುದು. ಸುಲಭವಾಗುತ್ತದೆಂಬ ಆಸೆಯಿಂದ, ಮೊದಲ ಮಹಾಯುದ್ಧದಲ್ಲಿ ಇಟಲಿ, ಆಸ್ಟ್ರಿಯ, ಬಲ್ಗೇರಿಯ ರಾಜ್ಯಗಳಿಂದ ಸೈನ್ಯಗಳು ನುಗ್ಗಿ ಬಂದು ಆಲ್ಬೇನಿಯದ ಕೆಲವು ಭಾಗಗಳನ್ನಾಕ್ರಮಿಸಿದುವು. ಯುದ್ಧ ಮುಗಿದ ಮೇಲೆ 1929ರಲ್ಲಿ ನಡೆದ ಸ್ಯಾನ್ ರೀಮೊ ಸಮ್ಮೇಳನದಲ್ಲಿ ಆಲ್ಬೇನಿಯ ಇಟಲಿಯ ರಕ್ಷಣೆಯಲ್ಲಿರಬೇಕೆಂದು ತೀರ್ಮಾನವಾಯಿತು. ಅಹಮದ್ ಜೋಗು ಎಂಬುವನು ಜೋಗ್ ಎಂಬ ಹೆಸರಿನಿಂದ ರಾಜ್ಯಾಧ್ಯಕ್ಷನಾದ. 1928ರಲ್ಲಿ ರಾಜ್ಯಾಂಗ ರಚನಾ ಸಭೆಯೊಂದು ನಿರ್ಮಿತವಾಗಿ, ಆಲ್ಬೇನಿಯ ಸಾಂಕುಶರಾಜಪ್ರಭುತ್ವವನ್ನು ಹೊಂದಬೇಕೆಂದು ನಿರ್ಣಯವಾಯಿತು. ಜೋಗನೇ ದೊರೆಯಾದ. ಎರಡನೆಯ ಮಹಾಯುದ್ಧದಲ್ಲಿ ಇಟಲಿ ಈ ದೇಶವನ್ನಾಕ್ರಮಿಸಿತು. 1944ರಲ್ಲಿ ಮಿತ್ರರಾಷ್ಟ್ರಗಳು ಅzನ್ನು ಸ್ವಾಧೀನಪಡಿಸಿಕೊಂಡ ಮೇಲೆ, ಅಲ್ಲಿನ ತನಕ ಇಟಲಿಯ ವಿರುದ್ಧ ಹೋರಡುತ್ತಿದ್ದ ಎನ್ವರ್ ಎಂಬುವನ ವಶಕ್ಕೆ ಬಂದಿತು. ಅವನು 1946ರಲ್ಲಿ ಕಮ್ಯೂನಿಸ್ಟ್ ಸರ್ಕಾರವನ್ನು ರಚಿಸಿದ. ಈಗ ಅದು ವಾರ್ಸ ಒಪ್ಪಂದಕ್ಕೆ ಒಳಪಟ್ಟ ರಾಜ್ಯಗಳಲ್ಲೊಂದಾಗಿ 1955ರಲ್ಲಿ ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆದಿದೆ. 1960ರಲ್ಲಿ ರಷ್ಯ ಮತ್ತು ಚೀನಗಳ ನಡುವೆ ಕಮ್ಯೂನಿಸ್ಟ್ ತತ್ತ್ವ, ಧೋರಣೆಗಳ ವಿಷಯವಾಗಿ ತೀವ್ರಭಿನ್ನಾಭಿಪ್ರಾಯ ಬೆಳೆದಾಗ ಆಲ್ಬೇನಿಯ ಚೀನಕ್ಕೆ ಬೆಂಬಲ ಕೊಟ್ಟಿತು. 1961 ರಲ್ಲಿ ರಷ್ಯ ಅದರೊಂದಿಗೆ ರಾಯಭಾರ ಸಂಪರ್ಕವನ್ನೂ ಕಡಿದು ಹಾಕಿತು. 

	ಕಮ್ಯೂನಿಸ್ಟ್ ಗಣರಾಜ್ಯವಾದ ಆಲ್ಬೇನಿಯದಲ್ಲಿ ಶಾಸನಾಧಿಕಾರ ಒಂದೇ ಮನೆಯುಳ್ಳ ಪ್ರತಿನಿಧಿಸಭೆಗೆ ಸೇರಿದೆ. ಒಂದೇ ಹೆಸರುಪಟ್ಟಿಯಿಂದ ಸದಸ್ಯರನ್ನು ನಾಲ್ಕು ವರ್ಷಕ್ಕೊಮ್ಮೆ ಚುನಾಯಿಸುತ್ತಾರೆ. ಸಾಮಾನ್ಯವಾಗಿ ಹತ್ತು ಸಾವಿರ ಜನಕ್ಕೊಬ್ಬ ಪ್ರತಿನಿಧಿಯಿರುತ್ತಾನೆ. ಅಧಿವೇಶನವಿಲ್ಲದ ಕಾಲದಲ್ಲಿ ಕಾರ್ಯಾಂಗವೇ ಅವಶ್ಯ ಶಾಸನಾಧಿಕಾರವನ್ನೂ ಹೊಂದಿರುತ್ತದೆ. ಈ ಕಾರ್ಯಾಂಗದ ಅಧ್ಯಕ್ಷನೇ ರಾಷ್ಟ್ರಾಧ್ಯಕ್ಷನೂ ಆಗಿರುತ್ತಾನೆ. ವಿಧಿನಿರ್ವಾಹಕ ಕಾರ್ಯ ಸಚಿವಸಂಪುಟಕ್ಕೆ ಸೇರಿದ್ದು, ಈ ಸಚಿವಸಂಪುಟದಲ್ಲಿ ಪ್ರಧಾನಿ, ಕೆಲವುರು ಉಪಪ್ರಧಾನಿಗಳು, ಮಂತ್ರಿಗಳು (ಇವರ ಸಂಖ್ಯೆ ಬದಲಾಯಿಸಬಹುದು); ಮತ್ತು ಕೆಲವು ಇಲಾಖೆ ಮುಖ್ಯಾಧಿಕಾರಿಗಳು ಇರುತ್ತಾರೆ. 18 ವಯಸ್ಸು ಕಳೆದ ಸ್ತ್ರೀಪುರಷರೆಲ್ಲರಿಗೂ ಮತದಾನದ ಹಕ್ಕಿದೆ. ಕಮ್ಯೂನಿಸ್ಟ್ ಪಕ್ಷವೊಂದೇ ಆಲ್ಬೇನಿಯದ ರಾಜಕೀಯಪಕ್ಷ. ಆಡಳಿತ ಸೌಕರ್ಯಕ್ಕಾಗಿ ದೇಶವನ್ನು 16 ಜಿಲ್ಲೆಗಳಾಗಿಯೂ 30 ನಗರಗಳಾಗಿಯೂ 2600 ಗ್ರಾಮಗಳಾಗಿಯೂ ವಿಭಾಗಿಸಲಾಗಿದೆ. ಪ್ರತಿಯೊಂದರಲ್ಲೂ ಮೂರು ವರ್ಷಕ್ಕೊಮ್ಮೆ ಚುನಾಯಿತರಾದ ಸದಸ್ಯರನ್ನುಳ್ಳ ಮಂಡಲಿಗಳು ಆಡಳಿತ ನಡೆಸುತ್ತವೆ. ಒಂದು ಉಚ್ಚತಮ ನ್ಯಾಯಾಲಯ, ಸೈನಿಕ ನ್ಯಾಯಾಲಯಗಳು, ಮತ್ತು ಪ್ರಜಾನ್ಯಾಯಾಲಯಗಳನ್ನು ನ್ಯಾಯಾಂಗ ಹೊಂದಿದೆ. ಪ್ರಜಾನ್ಯಾಯಾಲಯಗಳ ಅಧಿಕಾರ ಕ್ಷೇತ್ರವನ್ನು ನಿಗದಿ ಪಡಿಸಲಾಗಿದೆ. ಉಚ್ಚತಮ ನ್ಯಾಯಾಲಯ ಮತ್ತು ಸೈನಿಕ ನ್ಯಾಯಾಲಯಗಳ ನ್ಯಾಯಾಧೀಶರನ್ನು ಪ್ರತಿನಿಧಿಸಭೆ ನಾಲ್ಕು ವರ್ಷಕ್ಕೊಮ್ಮೆ ನಿಯಮಿಸುತ್ತದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ